ನಟಿ ಛಾಯಾಸಿಂಗ್ ತಂದೆ ತಾಯಿ
ನಟಿ ಛಾಯಾಸಿಂಗ್ ತಂದೆ ಗೋಪಾಲ್ ಸಿಂಗ್ ಹಾಗೂ ತಾಯಿ ಚಮನಲತಾ. ಛಾಯಾಸಿಂಗ್ ಅವರು 2012ರಲ್ಲಿ ನಟ ಕೃಷ್ಣ ಅವರನ್ನು ಮದುವೆ ಆಗಿದ್ದಾರೆ.
ಮೊದಲ ಸಿನಿಮಾ ಯಾವ್ದು
2000ರಲ್ಲಿ ತೆರೆಕಂಡ ಮುನ್ನುಡಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಛಾಯಾಸಿಂಗ್ ಗೆ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಪ್ರಾರಂಭದ ಮೂರು ವರ್ಷ ಕನ್ನಡದಲ್ಲೇ ಗುರುತಿಸಿಕೊಂಡಿದ್ದ ಇವರು ಅನಂತರ ತಮಿಳು, ಮಲಯಾಳಂ, ತೆಲುಗು, ಬಂಗಾಳಿ ಸಿನಿಮಾಗಳಲ್ಲೂ ಗುರುತಿಸಿಕೊಂಡಿದ್ದಾರೆ.
ಮೂಲತಃ ಉತ್ತರ ಪ್ರದೇಶದವರಾದ ಛಾಯಾಸಿಂಗ್ ಅವರು ವಿದ್ಯಾಭ್ಯಾಸ ಆಗಿದೆಲ್ಲ ಕರ್ನಾಟಕದಲ್ಲೇ. ಕನ್ನಡದಲ್ಲಿ ಅವಕಾಶಗಳು ಕಡಿಮೆ ಆದ ನಂತರ ತಮಿಳುನತ್ತ ಮುಖ ಮಾಡಿದರು. ನಟಿ ಛಯ ಸಿಂಗ್ ಬೇರೆ ಭಾಷೆಗಳಲ್ಲಿ ನಟಿಸಿದ ನಂತರ ಮತ್ತೆ ಕನ್ನಡಕ್ಕೆ ರೀ ಎಂಟ್ರಿ ಕೊಟ್ಟ ಛಾಯಾಸಿಂಗ್. ಮಫ್ತಿ ಸಿನಿಮಾದಲ್ಲಿ ಶಿವಣ್ಣನ ತಂಗಿಯಾಗಿ ನಟಿಸಿದ್ದಾರೆ.
ಸಿನಿಮಾ ಮತ್ತು ಕಿರುತೆರೆ ಎರಡರಲ್ಲೂ ಸಕ್ರಿಯರಾಗಿರುವ ನಟಿ ಛಯಾ ಸಿಂಗ್ ಕೆಲವು ಸಿನಿಮಾಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ. ಮದುವೆ ನಂತರವೂ ನಟನೆಯನ್ನು ಮುಂದುವರೆಸಿದ ನಟಿ ಚಾಯ ಸಿಂಗ್. ಕನ್ನಡದ ನಂದಿನಿ ಧಾರಾವಾಹಿ ಸೇರಿದಂತೆ ತಮಿಳಿನ ಕೆಲವು ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇದೀಗ ನಟಿ ಛಾಯಾ ಸಿಂಗ್ ಅಮೃತದಾರೆ ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ಇದೀಗ ತೆಲುಗು ತಮಿಳು ಸೀರಿಯಲ್ ಗಳಲ್ಲೂ ಕೂಡ ನಟನೆ ಮಾಡುತ್ತಿದ್ದಾರೆ.