ನಟ ರಾಜೇಶ್ ನಟರಂಗ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಪ್ರತಿಭಾವಂತ ನಟ. ತಮ್ಮ ಪ್ರಬುದ್ಧ ನಟನೆಯಿಂದ ಕಿರುತರೆ ಮತ್ತು ಹಿರಿತೆರೆ ಎರಡನ್ನು ಚಾಪು ಮೂಡಿಸಿದ್ದಾರೆ.
ನಟ ರಾಜೇಶ್ ನಟರಂಗ ವಿದ್ಯಾಭ್ಯಾಸ ಹಾಗೂ ನಟನೆ
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಾಜೇಶ್ ರವರು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಪದವಿ ನಂತರ ಕೆಲ ಕಾಲ ದೆಹಲಿಗೆ ತೆರಳಿದ್ದ ರಾಜೇಶ್ ನಂತರ ಮರಳಿ ಬಂದು ಸೀರಿಯಲ್ ನ ಪ್ರೊಡಕ್ಷನ್ಸ್ ಮ್ಯಾನೇಜರ್ ಹಾಗೂ ಕಾರ್ಯನಿರ್ವಹಿಸಿದ್ದಾರೆ.ನಂತರ ಸೀರಿಯಲ್ ಗಳಲ್ಲಿ ಅಭಿನಯಿಸಲು ಶುರು ಮಾಡಿದ ಇವರು ಮಾಯಾಮೃಗ, ಮುಕ್ತ, ಬದುಕು, ಶಕ್ತಿ, ಗುಪ್ತಗಾಮಿನಿ ಮುಂತಾದ ಧಾರವಾಹಿಗಳಲ್ಲಿ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಮಿಂಚಿದ್ದಾರೆ. ಹಲವು ಕಿರುತೆರೆ ಸೀರಿಯಲ್ ಗಳ ಸ್ಕ್ರಿಪ್ಟ್ ಬರೆದಿರುವ ಇವರು ಚಿತ್ರಗಳಲ್ಲಿ ತಮ್ಮ ಪ್ರಭುದ್ಧ ಅಭಿನಯಕ್ಕೆ ಹೆಸರುವಾಸಿಯಾಗಿದ್ದಾರೆ.
ನಟ ರಾಜೇಶ್ ನಟರಂಗ ವೈಯಕ್ತಿಕ ಜೀವನ
ನಟ ರಾಜೇಶ್ ನಟರಂಗ ರವರಿಗೆ ಒಬ್ಬಳು ಮಗಳಿದ್ದಾರೆ, ಮಗಳ ಹೆಸರು ಧ್ವನಿ ಮಗಳು ಕೂಡ ಅತ್ಯದ್ಭುತ ಬಾಲ ಕಲಾವಿದೆಯಾಗಿ ಮಿಂಚಿದವರು. ನಟರಾಜೇಶ್ ನಟರಂಗ ಎಲ್ಲರಂತಲ್ಲ ಎಲ್ಲಿಯೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬಿಟ್ಟು ಕೊಡದೆ ಗೌಪ್ಯತೆ ಕಾಪಾಡಿಕೊಂಡು ಬಂದಿದ್ದಾರೆ. ಮಗಳು ಸಹ ಕಲಾವಿದೆಯಾದ್ರು ಎಲ್ಲಿಯೂ ಈ ಬಗ್ಗೆ ಹೇಳಿಕೊಂಡಿಲ್ಲ ಹಾಗೂ ಮಾತನಾಡಿಲ್ಲ ಅನ್ನೋದು ವಿಶೇಷ. ಇದೀಗ ನಟರಾಜೇಶ್ ನಟರಂಗ ರವರು ಅಮೃತದಾರೆ ಸೀರಿಯಲ್ ಮೂಲಕ ಇನ್ನಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.