ಚಿತ್ರರಂಗಕ್ಕೆ ಪಾದಾರ್ಪಣೆ
ಅನಂತ್ ನಾಗ್ ರವರು ನಾಯಕ ನಟನಾಗಿ 1973ರಲ್ಲಿ ಸಂಕಲ್ಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. 52 ವರ್ಷಗಳಲ್ಲಿ ಇವತ್ತಿಗೂ ಸಕ್ರಿಯರಾಗಿರುವ ನಮ್ಮ ಅನಂತ್ ನಾಗರವರು ಕನ್ನಡ ತಮಿಳು ಮಲಯಾಳಂ ತೆಲುಗು ಹಿಂದಿ ಹಾಗೂ ಮರಾಠಿ ಭಾಷೆಗಳಲ್ಲಿ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
ನಟ ಅನಂತನಾಗ್ ರವರ ಸಿನಿ ಬದುಕಿನ ನಾಲ್ಕು ಚಿತ್ರಗಳಾದ ಮಿಂಚಿನ ಓಟ, ಹೊಸ ನೀರು, ಅವಸ್ಥೆ, ಗಂಗವ್ವ ಗಂಗಮಾಯಿ ಅಭಿನಯಕ್ಕಾಗಿ ರಾಜ್ಯ ಚಲನಚಿತ್ರದ ಶ್ರೇಷ್ಠ ನಟನ ಪ್ರಶಸ್ತಿ ಬಂದಿದೆ. ಹಾಗೂ ನಾ ನಿನ್ನ ಬಿಡಲಾರೆ, ಪಣ, ಹೆಂಡತಿಗೆ ಹೇಳಬೇಡಿ, ಗೌರಿ ಗಣೇಶ ಅಭಿನಯಕ್ಕೆ ಫಿಲಂ ಫೇರ್ ಪ್ರಶಸ್ತಿ ಲಭಿಸಿದೆ. ಇನ್ನೂ ಇವರು ಬರೆದಿರುವ "ನನ್ನ ತಮ್ಮ ಶಂಕರ" ಪುಸ್ತಕಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
ಕಿರುತೆರೆಯಲ್ಲಿ ಅನಂತನಾಗ್ ಅವರು ಆರು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ ನಟರಾಗಿ ಅಷ್ಟೇ ಅಲ್ಲದೆ ರಾಜಕೀಯದಲ್ಲೂ ತನ್ನ ಚಾಪನ್ನು ಮೂಡಿಸಿದ್ದಾರೆ. 1994ರಲ್ಲಿ ಮಲ್ಲೇಶ್ವರಂ ನ ಕ್ಷೇತ್ರದಿಂದ ಗೆದ್ದು ಬೆಂಗಳೂರು ನಗರ ಅಭಿವೃದ್ಧಿ ಸಚಿವರಾಗಿ ರಾಜ್ಯ ಸರ್ಕಾರದಲ್ಲಿ ಮಂತ್ರಿ ಹಾಗೂ ಸೇವೆ ಸಲ್ಲಿಸಿದ್ದಾರೆ.