Ticker

6/recent/ticker-posts

ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಅಶ್ವಿನಿ ಹಾಗೂ ಧ್ರುವಂತ್.!

Bigg boss kannada season 12 ಶುರುವಾದಾಗಿನಿಂದ ಗಿಲ್ಲಿ ಜೊತೆಯಲ್ಲೇ ಗಿಲ್ಲಿ ಅಷ್ಟೇ ಸಖತ್ ಸದ್ದು ಮಾಡುತ್ತಿರುವ ಕನ್ನಡ ಪರ ಹೋರಾಟಗಾರ್ತಿ ಅಶ್ವಿನಿ ಗೌಡ ಹಾಗೂ ಕಿರುತೆರೆ ನಟ ಧೃವಂತ್. ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾದಗಿನಿಂದ ಬಿಗ್ ಮನೆಯಲ್ಲಿ ಅಶ್ವಿನಿ ಗೌಡ ಸದ್ದು ಜೋರಾಗಿದದ್ದು ನಿಮಗೆಲ್ಲಾ ತಿಳಿದಿರುವ ವಿಷಯವೇ. ಜೊತೆಗೆ ಧ್ರುವಂತ್ ಅವರ ಆಟ ಕೂಡ ವೀಕ್ಷಕರಿಗೆ ತಲೆ ಬಿಸಿ ಮಾಡಿತ್ತು. ಧ್ರುವಂತ್ ಬಿಗ್ ಮನೆಯಲ್ಲಿ ಇದ್ದ ರೀತಿ ನೋಡಿ ವೀಕ್ಷಕರು ಇನ್ನೇನು ಕೆಲವೇ ವಾರಗಳಲ್ಲಿ ಧ್ರುವಂತ್ ಎಲಿಮಿನೇಟ್ ಆಗುತ್ತಾರೆ ಎಂದುಕೊಂಡಿದ್ದರು.ಆದರೆ ಬಿಗ್ ಮನೆಯಲ್ಲಿ ನೂರು ದಿನಗಳನ್ನು ಪೂರೈಸಿ ಇದೀಗ ಗ್ರಾಂಡ್ ಫಿನಾಲೆ ಹಂತಕ್ಕೆ ತಲುಪಿದ್ದಾರೆ.

ಕಿಚ್ಚನ ಚಪ್ಪಾಳೆಗೆ ಧ್ರುವಂತ್ ಕಣ್ಣೀರು.!
Bigg boss kannada 12 ಕೊನೆಯ ಕಿಚ್ಚನ ಪಂಚಾಯಿತಿಯಲ್ಲಿ ನಟ ಕಿಚ್ಚ ಸುದೀಪ್ ರವರು ಸಂಪೂರ್ಣ ಸೀಸನ್ ಧ್ರುವಂತ್ ರವರ ಆಟಕ್ಕೆ ಮೆಚ್ಚಿ 'ಕಿಚ್ಚನ ಚಪ್ಪಾಳೆ' ಕೊಟ್ಟಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ಧ್ರುವಂತ್ ರವರು ಕಿಚ್ಚನ ಮಾತನ್ನು ಕೇಳಿ ಹಾಗೂ ಕಿಚ್ಚನ ಚಪ್ಪಾಳೆಗೆ ಕಣ್ಣೀರಾಗಿದ್ದಾರೆ. ಬಿಗ್ ಮನೆಯ ಎಲ್ಲಾ ಸ್ಪರ್ಧಿಗಳು ಎಷ್ಟೇ ಟಾಂಗ್ ಕೊಟ್ಟರು ಎಲ್ಲೂ ಕೂಡ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೆ ಒಬ್ಬಂಟಿಯಾಗಿ ಬಿಗ್ ಬಾಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಇವರ ಕೆಲವು ಗುಣಗಳು ಹಾಗೂ ಅವರ ಕೋಪದ ಸಂಧರ್ಭದ ಮಾತುಗಳು ವೀಕ್ಷಕರಿಗೆ ಅಷ್ಟೇನು ಇಷ್ಟ ಆಗಿಲ್ಲ. ಇನ್ನೇನು ಈ ಸೀಸನ್ ಮುಗಿಯುವ ಹಂತಕ್ಕೆ ತಲುಪಿದ್ದು ಈ ನಡುವೆ ಕಿಚ್ಚನ ಕೊನೆಯ ಪಂಚಾಯಿತಿಯಲ್ಲಿ ಬಿಗ್ ಸರ್ಪ್ರೈಸ್ ಸಿಕ್ಕಂಗಾಗಿದೆ.

ಕೊನೆಗೂ ಕಿಚ್ಚನ ಚಪ್ಪಾಳೆ ಪಡೆದುಕೊಂಡ ಅಶ್ವಿನಿ ಗೌಡ
ಬಿಗ್ ಬಾಸ್ ಮೊದಲ ವಾರದಿಂದಲೂ ಬಿಗ್ ಮನೆಯಲ್ಲಿ ಸಖತ್ ಸೌಂಡ್ ಮಾಡ್ಕೊಂಡ್ ಬಂದಿರೋ ಅಶ್ವಿನಿ ಗೌಡ. ಕಿಚ್ಚನ ಚಪ್ಪಾಳೆ ಪಡೆದುಕೊಳ್ಳಲು ಪ್ರತಿ ವಾರ ಪ್ರಯತ್ನ ಪಡುತ್ತಲೇ ಇರುತ್ತಿದ್ದರು. ಕೊನೆಗೂ ಅವರ ಪ್ರಯತ್ನ ಫಲಿಸಿದೆ. ನಟ ಕಿಚ್ಚ ಸುದೀಪ್ ರವರು  BBK12 ಕೊನೆಯ ಪಂಚಾಯಿತಿಯಲ್ಲಿ ಅಶ್ವಿನಿ ಗೌಡ ಅವರಿಗೆ ಕಿಚ್ಚನ ಚಪ್ಪಾಳೆ ಕೊಟ್ಟಿದ್ದಾರೆ. ಇನ್ನೂ ಈ ಖುಷಿಗೆ ಅಶ್ವಿನಿ ಗೌಡರವರು ಭಾವುಕರಾಗಿದ್ದಾರೆ. ಈ ಸಂಚಿಕೆ ಶನಿವಾರದಂದು ಪ್ರಸಾರವಾಗಲಿದೆ.

Bigg boss kannada season 12 ಗ್ರಾಂಡ್ ಫಿನಾಲೆ ಇದೇ ಜನವರಿ 17 ರಂದು ನಡೆಯಲಿದೆ. ಈಗಾಗಲೇ ತಮ್ಮ ನೆಚ್ಚಿನ ಸ್ಪರ್ಧಿಯನ್ನು ಗೆಲ್ಲಿಸಲು ಸಾಮಾಜಿಕ ಜಾಲತಾಣದಲ್ಲಿ ತೊಡಗಿದ್ದಾರೆ ಬಿಗ್ ಬಾಸ್ ಅಭಿಮಾನಿಗಳು. ಟಾಪ್ 6 ಸ್ಪರ್ಧಿಯಾಗಿ ಈಗಾಗಲೇ ಧನುಷ್ ಗೌಡ ಅವರು ಫಿನಾಲೆ ದಿನಕ್ಕೆ ಕಾಲಿಟ್ಟಿದ್ದಾರೆ. ಇನ್ನುಳಿದಂತೆ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ರಘು, ಅಶ್ವಿನಿ ಗೌಡ, ರಾಶಿಕಾ, ಧ್ರುವಂತ್ ಹಾಗೂ ಕಾವ್ಯ ಇವರಲ್ಲಿ ಈ ವಾರ ಒಬ್ಬರು ಮತ್ತು ಮಿಡ್ ವೀಕ್ ಒಬ್ಬರು ಎಲಿಮಿನೇಟ್ ಆಗಿ ಬಿಗ್ ಮನೆಯಿಂದ ಮನೆಗೆ ಹೋಗಲಿದ್ದಾರೆ. ನೀವು ಕೂಡ ಬಿಗ್ ಬಾಸ್ ಅಭಿಮಾನಿಯಾಗಿದ್ರೆ ಈ ಸೀಸನ್ ನಲ್ಲಿ ಯಾರು ವಿನ್ ಆಗ್ತಾರೆ ಎಂದು ಕಮೆಂಟ್ ಮಾಡಿ ತಿಳಿಸಿ.

Post a Comment

0 Comments