Ticker

6/recent/ticker-posts

ಹೀರೋ ಆಗಲು ರೈಲ್ ನಲ್ಲಿ ಹೊರಟ ನಟ ಅನಂತ್ ನಾಗ್ ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದೇಕೆ.!

ನಟ ಅನಂತ್ ನಾಗ್ ರವರು 1967 ರಿಂದ 1972ರವರೆಗೆ ಸರಿಸುಮಾರು 51 ನಾಟಕಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಅನಂತರ ಕೆಲವೇ ವರ್ಷಗಳಲ್ಲಿ ಅನಂತನಾಗ್ ರವರದ್ದೆ ಪ್ರೊಡಕ್ಷನ್, ಡೈರೆಕ್ಷನ್ ಮತ್ತು ಅವರೇ ಆಕ್ಟರ್ ಅನ್ನುವ ಲೆವೆಲ್ ಗೆ ಬೆಳೆದರು. ಹಿಂದಿಯಲ್ಲಿ ಏಳು ಸಿನಿಮಾಗಳಲ್ಲಿ ನಟಿಸಿದ್ದಾರೆ ನಟ ಅನಂತನಾಗ್ ಹಿಂದಿಯಲ್ಲಿ ಅಂಕುರ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಕನ್ನಡದಲ್ಲಿ ಸಂಕಲ್ಪ ನಂತರ ಯಾವುದೇ ಸಿನಿಮಾ ಆಫರ್ ಗಳು ಬರಲಿಲ್ಲ. ಮತ್ತೆ ನಾಟಕಗಳನ್ನ ಮಾಡುತ್ತಾ ಬಂದರು ಇದರ ನಡುವೆ ಕನ್ನಡದ ಮತ್ತೊಂದು ಸಿನಿಮಾ ಗೆ ನಾಯಕ ನಟನ ಪಾತ್ರಕ್ಕೆ ಆಫರ್ ಬಂತು. ಅನಂತರ ಆ ಸಿನಿಮಾದವರು ಬೆಂಗಳೂರಿಗೆ ಬನ್ನಿ ಎಂದು ಹೇಳುತ್ತಾರೆ.

ರೈಲ್ ಹತ್ತಿದ ನಟ ಅನಂತನಾಗ್ ಆಸ್ಪತ್ರೆ ಸೇರಿದ್ದೇಕೆ
ಬೆಂಗಳೂರಿಗೆ ರೈಲ್ ನಲ್ಲಿ ಹೊರಟ ಅನಂತನಾಗ್ ರವರು ರೈಲ್ ನಲ್ಲಿ ಹೊರಟಿದ್ದು ಅಷ್ಟೇ ಅಂತ ನೆನಪಿರುವುದು. ನಟ ಅನಂತನಾಗ್ ಅವರಿಗೆ ಕಣ್ಣು ಬಿಟ್ಟರೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇದ್ದರಂತೆ. ಪ್ರಜ್ಞೆ ಬಂದ ನಂತರ ಆಸ್ಪತ್ರೆಯಲ್ಲಿ ಇದ್ದ ಡಾಕ್ಟರ್ ದೇವದತ್ ಅನ್ನುವರು ಅನಂತನಾಗ್ ಅವರಿಗೆ ಏನಾಗಿದೆ ಎಂದು ಹೇಳಿದರು. ವಿಷಯ ಕೇಳಿ ಅನಂತನಾಗ್ ರವರು ಮೊದಲಿಗೆ ಶಾಕ್ ಆದರಂತೆ. ನಂತರ ಡಾಕ್ಟರ್ ದೇವದತ್ ಅನ್ನುವರೇ ಅವರ ಮನೆಗೆ ಅನಂತ್ ನಾಗ್ ಅವರನ್ನು ಕರೆದುಕೊಂಡು ಹೋಗಿ ಸ್ವಲ್ಪ ದಿನ ನೋಡಿಕೊಂಡಿದ್ದಾರೆ. ಸಂಪೂರ್ಣ ಗುಣಮುಖರಾದ ಬಳಿಕ ಅನಂತನಾಗ್ ರವರು ಬಾಲ್ಯದಲ್ಲಿ ಸಮಯ ಕಳೆದ ಆಶ್ರಮಕ್ಕೆ ಹೋಗಲು ಮುಂದಾಗುತ್ತಾರೆ. ಡಾ. ದೇವದತ್ ಅವರಿಗೆ ಧನ್ಯವಾದ ತಿಳಿಸಿ ಆನಂದ ಆಶ್ರಮಕ್ಕೆ ಹೋಗುತ್ತಾರೆ. ಅಲ್ಲಿ ಕೂಡ 20 ದಿನಗಳು ಇದ್ದು ಅಲ್ಲಿಂದ ಮುಂಬೈಗೆ ಹೊರಡುತ್ತಾರೆ ನಟ ಅನಂತನಾಗ್ ರವರು.

ನಟ ಅನಂತನಾಗ್ ರವರಿಗೆ ಹಿಟ್ ಸಿನಿಮಾಗಳು ಸುರಿಮಳೆ
 ದೇವರ ಕಣ್ಣು,ಬಯಲುದಾರಿ, ಅನುರೂಪ, ನಾ ನಿನ್ನ ಬಿಡಲಾರೆ, ಈ ಅನೇಕ ಸಿನಿಮಾಗಳನ್ನು ಮಾಡಿ ಜನಪ್ರಿಯತೆ ಗಳಿಸುತ್ತಾರೆ. ಬಯಲುದಾರಿ ಸಿನಿಮಾ ಒಪ್ಪಿಕೊಂಡಾಗ ತುಂಬಾ ಖುಷಿಯಿಂದ ಒಪ್ಪಿಕೊಂಡು ನಂತರ ಒಂದು ಕಂಡೀಶನ್ ಹಾಕಿದ್ದರಂತೆ ಅನಂತನಾಗ್. ಅದು ಏನೆಂದರೆ ನನಗೆ ಸಿನಿಮಾದಲ್ಲಿ ಡ್ಯಾನ್ಸ್ ಮತ್ತು ಫೈಟ್ ಕೊಡಬೇಡಿ ಬೇಕಿದ್ರೆ ಸಾಂಗ್ ನಲ್ಲಿ ಅಭಿನಯ ಮಾಡ್ತೀನಿ ಅಂತ ಹೇಳಿದ್ರಂತೆ. ನೀವು ಕೂಡ ನಟ ಅನಂತನಾಗ್ ಅವರ ಸಿನಿಮಾಗಳನ್ನು ಸಾಕಷ್ಟು ನೋಡಿರುತ್ತೀರಾ ಹೆಚ್ಚಾಗಿ ಅವರು ಡ್ಯಾನ್ಸ್ ಮತ್ತು ಫೈಟ್ ಮಾಡಿರುವ ಸನ್ನಿವೇಶಗಳು ಕಡಿಮೆನೇ.
ಇನ್ನು ಆ ಕಾಲದಲ್ಲೇ ಹೆಲಿಕ್ಯಾಪ್ಟರ್ ಬೆಳೆಸಿ ಶೂಟಿಂಗ್ ಮಾಡಿರೋದು ತುಂಬಾ ವಿಶೇಷ. ಮತ್ತು ಬಯಲುದಾರಿ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮುಗಿದ ಮೇಲೆ ಡಾಕ್ಟರ್ ರಾಜಕುಮಾರ್ ಅವರು ಸಿನಿಮಾ ನೋಡಿ ಅನಂತನಾಗ್ ಅವರ ನಟನೆಯನ್ನು ಮೆಚ್ಚಿಕೊಂಡರು. ನಟನಾಗ್ ರವರಿಗೆ ಭಾಗ್ಯಾದ ಲಕ್ಷ್ಮಿ ಬಾರಮ್ಮ ಹಾಡು ತುಂಬಾ ಇಷ್ಟವಾದ ಸಾಂಗ್.