ಪ್ರತಿಭೆ ಒಂದು ಇದ್ದರೆ ಸಾಕು ಏನನ್ನಾದರೂ ಸಾಧಿಸಬಹುದು ಎಂದು ತೋರಿಸಿದ ಹಾಗೂ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಇಡೀ ದೇಶವೇ ತನ್ನತ್ತ ತಿರುಗು ನೋಡುವಂತೆ ಮಾಡಿದ. ರಾಕಿ ಬಾಯ್ ರಾಕಿಂಗ್ ಸ್ಟಾರ್ ಯಶ್ ರವರ ಜೀವನದ ಕಥೆ. ಇಂದು ರಾಕಿ ಬಾಯ್, ರಾಕಿಂಗ್ ಸ್ಟಾರ್ ಆಗಿರುವ ಯಶ್ ರವರು ನವೀನ್ ಕುಮಾರ್ ನಿಂದ ಯಶ್ ಆಗಲಿ ಏನೆಲ್ಲಾ ಕಷ್ಟಪಟ್ಟಿದ್ದಾರೆ ಗೊತ್ತಾ. ಇವರು ಒಬ್ಬ ಬಸ್ ಡ್ರೈವರ್ನ ಮಗ, ಇಂದು ರಾಕಿಂಗ್ ಸ್ಟಾರ್ ಯಶ್ ಅಂತಾನೇ ಗುರುತಿಸಿಕೊಂಡಿರುವ ಇವರ ಹುಟ್ಟು ಹೆಸರು ನವೀನ್ ಕುಮಾರ್ ಗೌಡ. ಯಶ್ ರವರು ಜನವರಿ 8 1986ರಲ್ಲಿ ಅರುಣ್ ಕುಮಾರ್ ಮತ್ತು ಪುಷ್ಪ ದಂಪತಿಯ ಮಗನಾಗಿ ಜನಿಸುತ್ತಾರೆ.
ಇವರ ತಂದೆ ಅರುಣ್ ಕುಮಾರ್ ಅವರು ಕೆ ಎಸ್ ಆರ್ ಟಿ ಸಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುತ್ತಾರೆ. ನಂತರ ಬಿಎಂಟಿಸಿಯಲ್ಲಿ ಡ್ರೈವರ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಯಶ್ ರವರು ತಮ್ಮ ಬಾಲ್ಯವನ್ನು ಮೈಸೂರಿನಲ್ಲಿ ಕಳೆಯುತ್ತಾರೆ ಇವರು ಮಹಾಜನ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪಡೆಯುತ್ತಾರೆ. ಬಾಲ್ಯದಿಂದಲೂ ತುಂಬಾ ತುಂಟರಾಗಿದ್ದ ಯಶ್ ರವರು ಸ್ನೇಹಿತರ ಜೊತೆ ಗಲಾಟೆಗಳನ್ನು ಮಾಡಿಕೊಂಡು ಮನೆಯಲ್ಲಿ ಇವರ ತಂದೆ ಲಾಠಿಯಿಂದ ಹೊಡೆಯುತ್ತಿದ್ದರು. ಶಾಲೆಯಲ್ಲಿ ಓದುತ್ತಿರುವಾಗಿನಿಂದಲೇ ಯಶ್ ರವರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದರು. ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಸಹ ಕಪ್ಪನ್ನು ಗೆದ್ದು ತರುತ್ತಿದ್ದರು.
ನಟ ಯಶ್ ಅವರ ನೆಚ್ಚಿನ ನಟ
ಒಮ್ಮೆ ಉಪೇಂದ್ರರವರ ಎ ಸಿನಿಮಾದ ಸಮಾರಂಭದಲ್ಲಿ ಯಶ್ ರವರು ಡ್ಯಾನ್ಸ್ ವಂದನೆ ಮಾಡುತ್ತಾರೆ. ಆಗ ಉಪೇಂದ್ರರವರು ಚೆನ್ನಾಗಿ ಡ್ಯಾನ್ಸ್ ಮಾಡಿದ್ರಿ ಅಂತ ಹೇಳುತ್ತಾರೆ ಹಾಗೂ ಯಶ್ ರವರಿಗೆ ಬಾಲ್ಯದಿಂದಲೂ ಉಪೇಂದ್ರರವರು ನೆಚ್ಚಿನ ನಟ ಆಗಿರುತ್ತಾರೆ. ಹಾಗೆ ಸಂದರ್ಶನ ಒಂದರಲ್ಲಿ ನನಗೆ ಉಪೇಂದ್ರರವರು ಇನ್ಸ್ಪಿರೇಶನ್ ಅಂತ ಹೇಳಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಯಶ್ ರವರು ಹೀರೋ ಆಗಬೇಕು ಎಂದು ಕನಸನ್ನು ಕಾಣ್ತಾ ಇರುತ್ತಾರೆ. ಬಾಲ್ಯದಲ್ಲಿ ತಮ್ಮ ಸ್ನೇಹಿತರ ಜೊತೆ ನಾನು ಹೀರೋ ಹಾಗೆ ಆಗ್ತೀನಿ. ಪ್ರಶಸ್ತಿಯನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಿರುತ್ತಾರೆ.
ಎಸ್ ಎಸ್ ಎಲ್ ಸಿ ಆದ ಮೇಲೆ ಯಶ್ ರವರು ಕುಟುಂಬದ ಕಷ್ಟಕ್ಕೆ ಸ್ಪಂದಿಸಲು ಪ್ರಾವಿಷನ್ ಸ್ಟೋರ್ ನಲ್ಲಿ ಕೆಲಸವನ್ನು ಮಾಡ್ತಾರೆ. ಪಿಯುಸಿ ಓದುವಾಗ ಕುಟುಂಬದ ಸಮಸ್ಯೆಗಳನ್ನು ನೋಡಿ ವಿದ್ಯಾಭ್ಯಾಸವನ್ನು ನಿಲ್ಲಿಸಿ. ನಾನು ಏನನ್ನಾದರೂ ಸಾಧಿಸಿಕೊಂಡು ಬರುತ್ತೇನೆ ಎಂದು ಮನೆಯವರಿಗೆ ಹೇಳು ಬೆಂಗಳೂರಿಗೆ ಬರುತ್ತಾರೆ ಯಶ್.
Yash ಬೆಂಗಳೂರಿನ ಜೀವನ
ಬೆಂಗಳೂರಿನಲ್ಲಿ ಯಾರ ಪರಿಚಯನು ಇರದ ಯಶ್ ರವರು ಏನನ್ನಾದರೂ ಮಾಡಿ ಇಂಡಸ್ಟ್ರಿಗೆ ಹೋಗಬೇಕು ಎಂಬ ಆಸೆಯಿಂದ ಯಾವುದೋ ಒಂದು ಸಿನಿಮಾದ ಪ್ರೊಡಕ್ಷನ್ ನಲ್ಲಿ ಕೆಲಸ ಸೇರುತ್ತಾರೆ. ಅಲ್ಲಿ ಕೆಲಸ ಮಾಡುವಾಗ ಕಾಫಿ ಟೀ ಸಹ ತಂದು ಕೊಟ್ಟಿರುತ್ತಾರೆ. ನಾನು ಈ ರೀತಿಯ ಕೆಲಸವನ್ನೆಲ್ಲ ಮಾಡಬೇಕಾ ಅಂತ ನೊಂದುಕೊಳ್ಳುತ್ತಾರೆ. ಆದರೂ ಎಲ್ಲಾ ಕೆಲಸವನ್ನು ಮಾಡುತ್ತಿರುತ್ತಾರೆ.ಅನಂತರ ಆ ಸಿನಿಮಾದ ಶೂಟಿಂಗ್ ಅರ್ಧದಲ್ಲಿ ನಿಂತು ಹೋಗುತ್ತದೆ. ಆಗ ತಾನೆ ಬೆಂಗಳೂರಿಗೆ ಬಂದಿದ್ದ ಯಶ್ ಗೆ ಇಲ್ಲಿ ಯಾರ ಪರಿಚಯನು ಇರೋದಿಲ್ಲ. ಸಿನಿಮಾದ ಶೂಟಿಂಗ್ ಬೇರೆ ನಿಂತು ಹೋಗಿರುತ್ತದೆ. ನಾನು ಏನು ಮಾಡಲಿ ಎಂದು ಆಲೋಚನೆ ಮಾಡುತ್ತಿರುವಾಗ ಅವರು ತಮ್ಮ ಲಗೇಜ್ ಅನ್ನು ಇಡಲು ತಮ್ಮ ರಿಲೇಟಿವ್ ಒಬ್ಬರಿಗೆ ಕಾಲ್ ಮಾಡ್ತಾರೆ. ರಿಲೇಟಿವ್ ಅವರು ನಾನು ಮನೆಯಲ್ಲಿ ಇಲ್ಲ ಅಂತ ಹೇಳಿ ಕಾಲ್ ಅನ್ನು ಕಟ್ ಮಾಡ್ತಾರೆ.
ಆಗ ಯಶ್ ಏನು ಮಾಡಲಿ ಎಂದು ಯೋಚನೆ ಮಾಡುತ್ತಿರುವಾಗ. ಈ ಹಿಂದೆ ಕೆಲಸ ಮಾಡುತ್ತಿದ್ದಾಗ ಪರಿಚಯ ಆಗಿದ್ದ ಸ್ನೇಹಿತ ಮೋಹನ್ ರವರು ಇವರನ್ನ ಮಾತನಾಡಿಸಿ ಬನ್ನಿ ನಮ್ಮ ಮನೆಗೆ ಹಂತ ಕರೆದುಕೊಂಡು ಹೋಗುತ್ತಾರೆ. ಮೋಹನ್ ರವರ ಮನೆಗೆ ಹೋದ ಯಶ್ ಮೋಹನ್ ಅವರು ಇದ್ದ ಮನೆ ಚಿಕ್ಕದು ಎಂದು ತಿಳಿದು. ನಾನು ಇವರಿಗೆ ತೊಂದರೆ ಕೊಡಬಾರದು ಎಂದು ತಮ್ಮ ಲಗೇಜ್ ಮಾತ್ರ ಮೋಹನ್ ಮನೆಯಲ್ಲಿ ಇಟ್ಟು ಅಲ್ಲಿಂದ ಹೊರ ಬರುತ್ತಾರೆ.