Ticker

6/recent/ticker-posts

ನಿರ್ದೇಶಕ ಪ್ರಕಾಶ್ ವೀರ್ ಬಗ್ಗೆ ಕಿರು ನೋಟ.!

ಕನ್ನಡ ಚಿತ್ರರಂಗದಲ್ಲಿ ಹಾಗೂ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಡೆವಿಲ್ ಚಿತ್ರದ ನಿರ್ದೇಶಕ ಹಾಗೂ ಸಹ ನಿರ್ಮಾಪಕ ಹಾಕಿರುವ ಈ ಪ್ರಕಾಶ್ ವೀರ್ ಯಾರು?. ಇವರ ಹಿನ್ನೆಲೆ ಏನು? ಇವರು ಈ ಹಿಂದೆ ನಿರ್ದೇಶನ ಮಾಡಿರುವ ಸಿನಿಮಾಗಳು ಎಷ್ಟು. ಡಿ ಬಾಸ್ ದರ್ಶನ್ ಅವರನ್ನು ನಂಬಿ ಕೋಟಿಗಟ್ಟಲೆ ಹಣ ಹಾಕಿದ್ದ ಪ್ರಕಾಶ್ ವೀರ್ ಅವರ ಬಗ್ಗೆ ತಿಳಿದುಕೊಳ್ಳಲು ಮಿಸ್ ಮಾಡ್ದೆ ಕೊನೆವರೆಗೂ ಓದಿ.

ಪ್ರಕಾಶ್ ವೀರ್ ಮೊದಲ ವೃತ್ತಿ ಏನು?
ವಿಕಿಪೀಡಿಯ ಪ್ರಕಾರ ನಿರ್ದೇಶಕ ಪ್ರಕಾಶ್ ವೀರ್ ರವರು ಲಂಡನ್ ನಲ್ಲಿ ಇನ್ವೆಸ್ಟ್ಮೆಂಟ್ ಬ್ಯಾಂಕರ್ ಆಗಿ ಕೆಲಸ ಮಾಡುತ್ತಿದ್ದರು. 2003 ರಲ್ಲಿ ನಿರ್ದೇಶಕರಾಗಿ ಪಾದರ್ಪಣೆ ಮಾಡಿದ ಇವರು ಚಲನಚಿತ್ರೋದ್ಯಮದಲ್ಲಿ ತಮ್ಮ ವೃತ್ತಿ ಜೀವನವನ್ನು ಮುಂದುವರಿಸಲು ಲಂಡನ್ನ ತಮ್ಮ ಕೆಲಸವನ್ನು ಕೂಡ ಬಿಟ್ಟರು.

2003 ರಲ್ಲಿ ನಿರ್ದೇಶಕರಾಗಿ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇವರು ನಟ ವಿಜಯ ರಾಘವೇಂದ್ರ ರವರ ಖುಷಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಕೂಡ ಆ ಸಮಯದಲ್ಲಿ ಯಶಸ್ವಿ ಕಂಡಿದೆ.

ಪಾರ್ವತಮ್ಮ ರಾಜಕುಮಾರ್ ರವರ ಸಹೋದರಿಯ ಮಗ
ಇನ್ನೂ ಪ್ರಕಾಶ್ ವೀರ್ ರವರು ನಟ ಡಾ. ರಾಜಕುಮಾರ್ ರವರ ಪತ್ನಿ ಪಾರ್ವತಮ್ಮ ರವರ ಸಹೋದರಿಯ ಮಗ. ಹಾಗೂ ನಟ ವಿಜಯ ರಾಘವೇಂದ್ರ ರವರ ತಂದೆ ಚಿನ್ನೆಗೌಡ ಅವರಿಗೂ ಸಹೋದರಿಯ ಮಗ ಆಗಬೇಕು. ನಿರ್ದೇಶಕ ಪ್ರಕಾಶ್ ರವರ ತಂದೆ ಸಿ ಜಯರಾಮ್, ತಾಯಿ ಜಯಮ್ಮ, ಮತ್ತು ಪತ್ನಿ ತಶ್ವಿನಿ ಪ್ರಕಾಶ್. ನಿರ್ದೇಶಕ ಪ್ರಕಾಶ್ ರವರ ಕುಟುಂಬದ ಎಲ್ಲರೂ ಕೂಡ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.

ನಿರ್ದೇಶಕ ಪ್ರಕಾಶ್ ವೀರ್ ತಂದೆ ಕೂಡ ಚಿತ್ರರಂಗದ ನಿರ್ಮಾಪಕರು
ಪ್ರಕಾಶ್ ವೀರ್ ತಂದೆ ಸಿ ಜಯರಾಮ್ ಕೂಡ ಸಪ್ತಸ್ವರ ಮೂವಿ ಮೇಕರ್ಸ್ ಎಂಬ ನಿರ್ಮಾಣ ಸಂಸ್ಥೆ ಮೂಲಕ ಶ್ರೀನಾಥ್ ನಟನೆಯ ಪಾವನ ಗಂಗಾ, ನಟ ರಜನಿಕಾಂತ್ ಮತ್ತು ವಿಷ್ಣುವರ್ಧನ್ ಅಭಿನಯದ ಗಲಾಟೆ ಸಂಸಾರ ಹಾಗೂ ನಾ ನಿನ್ನ ಬಿಡಲಾರೆ ಸಿನಿಮಾಗಳು. ಸೇರಿದಂತೆ ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ಮಾಣ ಮಾಡಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ನಿರ್ಮಾಪಕ ಸಿ ಜಯರಾಮ್ ರವರು 2021 ಸೆಪ್ಟೆಂಬರ್ 9 ರಂದು ವಿಧಿವಶರಾದರು.