Ticker

6/recent/ticker-posts

ಬಿಗ್ ಬಾಸ್ ಗಿಲ್ಲಿ ಫೋಟೋನಾ ಟ್ಯಾಟೂ ಹಾಕಿಸಿಕೊಂಡ ಫ್ಯಾನ್.!

ಬಿಗ್ ಬಾಸ್ ಕನ್ನಡ ಸೀಸನ್ 12 ರ ಸ್ಪರ್ಧಿಯಾಗಿರುವ ಗಿಲ್ಲಿ ನಟ ಅವರ ಕ್ರೇಜ್ ಸೀಸನ್ ಶುರುವಾದಗಿಂದ ಹೆಚ್ಚಾಗಿರೋದು ನಿಮ್ಮಗೆಲ್ಲಾ ತಿಳಿದಿರುವ ವಿಷಯವೇ. BBK12 ಸೀಸನ್ ನಲ್ಲಿ ಈ ಸಲ ಗಿಲ್ಲಿ ಇಲ್ಲದಿದ್ದರೆ ಈ ಸೀಸನ್ ಹಿಟ್ ಆಗ್ತಾನೆ ಇರ್ಲಿಲ್ಲ ಅನ್ನೋದು ಕೂಡ ಸತ್ಯ. ಅಕ್ಟೋಬರ್ ಅಂತ್ಯದಲ್ಲಿ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡ ಬಿಗ್ ಬಾಸ್ ಕನ್ನಡ 12 ಷೋ ಈಗಾಗಲೇ ಗ್ರ್ಯಾಂಡ್ ಫಿನಾಲೆ ಅಂತಕ್ಕೆ ತಲುಪಿದೆ. ಷೋ ಶುರುವಾದ ಮೊದಲ ವಾರದಿಂದಲೇ ಈ ಸಲ ಗಿಲ್ಲಿ ನೇ ವಿನ್ ಆಗೋದು ಎಂದು ವೀಕ್ಷಕರು ಈಗಾಗಲೇ ಊಹಿಸಿದ್ದಾರೆ.ಗಿಲ್ಲಿ ನಟ ಅವರ ಕಾಮಿಡಿ ಹಾಗೂ ಅವರ ವ್ಯಕ್ತಿತ್ವದಿಂದಲೇ ಭಾರೀ ಜನಪ್ರಿಯತೆ ಗಳಿಸಿದ್ದಾರೆ.

ಗಿಲ್ಲಿ ನಟ ಫೋಟೋನ ಟ್ಯಾಟೂ ಹಾಕಿಸಿಕೊಂಡ ಫ್ಯಾನ್.!
ಬಿಗ್ ಬಾಸ್ ಗಿಲ್ಲಿ ನಟ ಅವರ ಕ್ರೇಜ್ ಯಾವ ಮಟ್ಟಕ್ಕೆ ಹೋಗಿದೆ ಅಂದ್ರೆ, ಗಿಲ್ಲಿ ಅವರ ಫೋಟೋವನ್ನು ಅಭಿಮಾನಿ ಒಬ್ಬರು ತಮ್ಮ ತೋಳಿನ ಮೇಲೆ ಅಚ್ಛೇ ಹಾಕಿಸಿಕೊಂಡಿದ್ದಾರೆ. ಟ್ಯಾಟೂ ಹಾಕಿಸಿಕೊಳ್ಳುವ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ನೆಚ್ಚಿನ ಸ್ಪರ್ಧಿ ಟ್ಯಾಟೂ ಯಿಂದ ಫ್ಯಾನ್ ಸಖತ್ ಖುಷಿಯಲ್ಲಿದ್ದಾರೆ. ಇನ್ನೂ ಗಿಲ್ಲಿ ಟ್ಯಾಟೂ ವನ್ನು ಮೊದಲ ಬಾರಿಗೆ ಟ್ಯಾಟೂ ಕಲಾವಿದ 'ಟ್ಯಾಟೂ ಘೋಸ್ಟ್ ' ಎಂಬುವರು ಹಾಕಿದ್ದಾರೆ.

ಗಿಲ್ಲಿ ಆಸೆಯನ್ನು ನೆರವೇರಿಸಿದ ಫ್ಯಾನ್ಸ್.!
ಗಿಲ್ಲಿ ನಟ ಅವರು ಬಿಗ್ ಬಾಸ್ ಷೋ ಹೋಗೊಕು ಮುಂಚೆ ಯಿಂದಲೇ ಕಾಮಿಡಿ ಶಾರ್ಟ್ ವಿಡಿಯೋಸ್ ಹಾಗೂ ಕಾಮಿಡಿ ಷೋ ಗಳ ಮೂಲಕ ಭಾರೀ ಜನಪ್ರಿಯತೆ ಪಡೆದಿದ್ದರು. ಆದರೂ ಅವರ ಸಾಮಾಜಿಕ ಜಾಲತಾಣದ ಇನ್ಸ್ಟಾದಲ್ಲಿ 100K ಫಾಲ್ಲೋರ್ಸ್ ಗಳಿಸಿದ್ದರು. ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಬಳಿಕ ದಿನದಿಂದ ದಿನಕ್ಕೆ ಫಾಲ್ಲೋರ್ಸ್ ಸಂಖ್ಯೆ ಹೆಚ್ಚಾಯ್ತು. ಈ ನಡುವೆ ಬಿಗ್ ಬಾಸ್ ಷೋ ನಲ್ಲಿ ಗಿಲ್ಲಿ ನಟ ಹೊರಗಡೆ ಹೋದಾಗ '1M ಫಾಲ್ಲೋರ್ಸ್ ಆಗಿದ್ರೆ' ಎಂದು ಕಾವ್ಯ ಜೊತೆ ಅವರ ಆಸೆಯನ್ನು ಹಂಚಿಕೊಂಡಿದ್ದಾರೆ. ಇದನ್ನ ನೋಡಿದ ಅಭಿಮಾನಿಗಳು ಕೆಲವೇ ದಿನಗಳಲ್ಲಿ ಅವರ ನೀರಿಕ್ಷೆಗು ಮೀರಿ ಫಾಲ್ಲೋರ್ಸ್ ಸಂಖ್ಯೆ ಹೆಚ್ಚಾಗುವಂತೆ ಮಾಡಿದ್ದಾರೆ. ಈಗಾಗಲೇ 1M ಸಂಪೂರ್ಣ ಆಗಿ 1.2M ನಂತ ಫಾಲ್ಲೋರ್ಸ್ ಸಂಖ್ಯೆ ಓಡುತ್ತಿದೆ.

Post a Comment

0 Comments