Ticker

6/recent/ticker-posts

Chikkanna : ಕಿರಾತಕ ಸಿನಿಮಾಗೆ ಚಿಕ್ಕಣ್ಣ ಆಯ್ಕೆ ಆಗಿದ್ದು ಹೇಗೆ ಗೊತ್ತಾ?

ಮಂಡ್ಯ ಜಿಲ್ಲೆಗೆ 75 ವರ್ಷ ತುಂಬಿದ ಸಂದರ್ಭದಲ್ಲಿ ಆಯೋಜನೆ ಮಾಡಿದ್ದ ಅಮೃತ ಮಹೋತ್ಸವ ಎಂಬ ಕಾರ್ಯಕ್ರಮದಲ್ಲಿ. ಚಿಕ್ಕಣ್ಣ ಮಾಡಿದ ಹಾಸ್ಯ ನಟನೆ ನೋಡಿ ನಟ ಯಶ್ ರವರು ಚಿಕ್ಕಣ್ಣ ರವರಿಗೆ ತಾವು ನಟನೆಯಲ್ಲಿ ತೊಡಗಿದ್ದ ಕಿರಾತಕ ಸಿನಿಮಾದಲ್ಲಿ ಅವಕಾಶ ನೀಡುವಂತೆ ಚಿತ್ರದ ನಿರ್ದೇಶಕರಿಗೆ ಹೇಳುತ್ತಾರೆ.

ಕಿರಾತಕ ಸಿನಿಮಾ ಒಳ್ಳೆಯ ಹೆಸರನ್ನು ಕಾಣುತ್ತದೆ. ಇದಾದ ನಂತರ ಚಿಕ್ಕಣ್ಣನಿಗೆ ಹಲವಾರು ನಟರ ಜೊತೆ ನಟಿಸಲು ಅವಕಾಶ ಸಿಗುತ್ತದೆ. ಚಿಕ್ಕಣ್ಣನವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಶ್ರೀ ಮುರಳಿ, ಶರಣ್ ಸೇರಿದಂತೆ ಸ್ಯಾಂಡಲ್ವುಡ್ನ ಎಲ್ಲಾ ಕಲಾವಿದರ ಜೊತೆಗೆ ಬೆಳ್ಳಿ ಪರದೆಯನ್ನು ಹಂಚಿಕೊಂಡಿದ್ದಾರೆ. ಮಾಡಿದ ಎಲ್ಲಾ ಸಿನಿಮಾಗಳಲ್ಲೂ ತಮ್ಮದೇ ಆದ ವಿಶೇಷ ಅಭಿನಯ ಹಾಗೂ ಪಾತ್ರಗಳಿಂದ ಕರ್ನಾಟಕದಲ್ಲಿ ಜನಪ್ರಿಯ ಹಾಸ್ಯ ನಟರಾಗುತ್ತಾರೆ. ಇಲ್ಲಿಯವರೆಗೂ ಕನ್ನಡದ 80ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಹಾಗೂ ಉಪಾಧ್ಯಕ್ಷ ಸಿನಿಮಾದಲ್ಲಿ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಅಭಿನಯಕ್ಕೆ ಸಾಕಷ್ಟು ಪ್ರಶಸ್ತಿಗಳು ಕೂಡ ಬಂದಿವೆ 2013-14ರಲ್ಲಿ ರಾಜಾಹುಲಿ ಮತ್ತು ಅಧ್ಯಕ್ಷ ಸಿನಿಮಾಗೆ ಎರಡು ಬಾರಿ ಸೈಮ ಉತ್ತಮ ಹಾಸ್ಯ ನಟ ಪ್ರಶಸ್ತಿ. 2017ರಲ್ಲಿ ಹೈಫಾ ಉತ್ಸವ ಮತ್ತು ಹಾಸ್ಯನಟ ಪ್ರಶಸ್ತಿ ಮತ್ತು 2019 ರಲ್ಲಿ ಜೀ ಕನ್ನಡ ಹೆಮ್ಮೆಯ ಹಾಸ್ಯ ನಟ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಚಿಕ್ಕವಯಸ್ಸಿಂದಲೂ ಚಿಕ್ಕಣ್ಣ ತಂದೆಯವರನ್ನು ದ್ವೇಷಿಸುತ್ತಲೇ ಬರುತ್ತಾರೆ. ಯಾಕೆಂದರೆ ಅವರ ತಂದೆಯವರು ಯಾವಾಗಲೂ ಹೊಡೆಯುತ್ತ, ಚಿಕ್ಕಣ್ಣನವರು ನಾಟಕ ಮಾಡುವುದು ವಿರೋಧಿಸುತ್ತ ಇರುತ್ತಾರೆ. ಆದರೆ ಚಿಕ್ಕಣ್ಣ ಚಿತ್ರರಂಗದಲ್ಲಿ ಒಳ್ಳೆಯ ಸ್ಥಾನಕ್ಕೆ ಬಂದ ಮೇಲೆ ತಂದೆಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಆಸೆಯನ್ನು ಹೊಂದಿರುತ್ತಾರೆ. ಆದರೆ ಆಕಸ್ಮಿಕವಾಗಿ ತಂದೆ ಗಾಡಿಯಲ್ಲಿ ಹೋಗುವಾಗ ಅಪಘಾತವಾಗಿ ತುಂಬಾ ಸೀರಿಯಸ್ ಆಗಿರುತ್ತಾರೆ. ಆಗ ಚಿಕ್ಕಣ್ಣನವರು ಶೂಟಿಂಗ್ನಲ್ಲಿ ಇರುತ್ತಾರೆ ವಿಪರ್ಯಾಸ ಏನು ಅಂತ ಕೇಳಿದ್ರೆ ಸಿನಿಮಾ ಶೂಟಿಂಗ್ನಲ್ಲೂ ಸಹ ತಂದೆ ಸತ್ತಿರುವ ದೃಶ್ಯವನ್ನು ಚಿತ್ತೀಕರಿಸಬೇಕಾಗಿರುತ್ತದೆ. ಶೂಟಿಂಗ್ ಮುಗಿದ ನಂತರ ಆಸ್ಪತ್ರೆಗೆ ಹೋಗುತ್ತಾರೆ. ನಂತರ ಹಲ್ಲಿನ ವೈದ್ಯರನ್ನು ರಿಕ್ವೆಸ್ಟ್ ಮಾಡಿಕೊಳ್ಳುತ್ತಾರೆ. ಚಿಕಿತ್ಸೆಯ ನಂತರ ಚಿಕ್ಕಣ್ಣನವರ ತಂದೆಯ ಆರೋಗ್ಯ ಸುಧಾರಿಸುತ್ತದೆ. ಇದಾದ ಒಂದು ವರ್ಷದ ಬಳಿಕ ಚಿಕ್ಕಣ್ಣನವರ ತಂದೆ ಹೃದಯಘಾತದಿಂದ ಸಾವನ್ನಪ್ಪುತ್ತಾರೆ.

ನನ್ನ ಕಷ್ಟಕಾಲದಲ್ಲಿ ನನ್ನ ತಂದೆನ ಚೆನ್ನಾಗಿ ನೋಡಿಕೊಳ್ಳಲು ಆಗಲಿಲ್ಲ. ಈಗ ಜೀವನದಲ್ಲಿ ಚೆನ್ನಾಗಿದ್ದೀನಿ ಎನ್ನುವಾಗ ನನ್ನ ತಂದೆನೇ ಇಲ್ಲ ಎಂದು ಶೋ ಒಂದರಲ್ಲಿ ಕಣ್ಣೀರನ್ನು ಹಾಕಿದ್ದಾರೆ ನಟ ಚಿಕ್ಕಣ್ಣ. ಯಾವುದೋ ಒಂದು ಚಿಕ್ಕ ಹಳ್ಳಿಯಿಂದ ಕಡು ಬಡತನದ ಕುಟುಂಬದಲ್ಲಿ ಹುಟ್ಟಿ. ತನ್ನ ಸ್ವಂತ ಪರಿಶ್ರಮದಿಂದ ನಟ ಚಿಕ್ಕಣ್ಣನವರು ಡಿ ಬಾಸ್ ರೀತಿಯ ಫಾರ್ಮ್ ಹೌಸ್ ಕೂಡ ಮಾಡಿದ್ದಾರೆ. ಜೀವನದಲ್ಲಿ ಏನಾದರೂ ಸಾಧಿಸಬೇಕು ಅನ್ನೋರಿಗೆ ಇವರು ಕೂಡ ಆದರ್ಶವಾಗಿದ್ದಾರೆ. ಒಬ್ಬ ಗಾರೆ ಕೆಲಸಗಾರ ಇಂದು ಸ್ಟಾರ್ ನಟರಿಗೆ ಸರಿ ಸಮಾನವಾಗಿ ಅಭಿನಯಿಸುವ ಮಟ್ಟಕ್ಕೆ ಬೆಳೆಯಬೇಕು ಎಂದರೆ ಅವರ ಪರಿಶ್ರಮವೇ ಇದಕ್ಕೆಲ್ಲ ಕಾರಣ.