Ticker

6/recent/ticker-posts

ಮನೆಯಲ್ಲೇ ನಟಿ ಗಾಯತ್ರಿ ಯನ್ನು ಮದುವೆಯಾಗಿದ್ದೇಕೆ ನಟ ಅನಂತ್ ನಾಗ್.!

ನಟ ಅನಂತ್ ನಾಗ್ ಅವರಿಗೆ ಗಾಯತ್ರಿ ಅವರು ಶೂಟಿಂಗ್ ಸೆಟ್ನಲ್ಲಿ ಪರಿಚಯ ಆಗಿದ್ದು. ಅದು ಕೂಡ ಶಂಕರ್ ನಾಗ್ ಜೊತೆ ನಟಿ ಗಾಯತ್ರಿಯವರು ಸಿನಿಮಾ ಶೂಟಿಂಗ್ನಲ್ಲಿ ತೊಡಗಿದ್ದರು. ಆ ಸಂದರ್ಭದಲ್ಲಿ ನಟ ಶಂಕರ್ ನಾಗ್ ಅವರು ನಟಿ ಗಾಯಿತ್ರಿ ಅವರನ್ನು ನಮ್ಮ ಅಣ್ಣ ಇಲ್ಲೇ ಪಕ್ಕದ ಸೆಟ್ನಲ್ಲಿ ಆಕ್ಟ್ ಮಾಡ್ತಿದ್ದಾರೆ. ಬನ್ನಿ ಅಂತ ಹೇಳಿ, ಕರ್ಕೊಂಡು ಬಂದಾಗ ನಟ ಅನಂತನಾಗ್ ರವರು ನಾರದನ ಗೆಟಪ್ ನಲ್ಲಿ ಇದ್ದರು. ಆವಾಗಲೇ ಮೊದಲ ಬಾರಿಗೆ ಗಾಯಿತ್ರಿ ರವರು ಅನಂತನಾಗ್ ರವರನ್ನು ನೋಡಿದ್ದು. ಅನಂತರ ಅನಂತನಾಗ್ ಜೊತೆಯಲ್ಲಿ "ಸುಖ ಸಂಸಾರಕ್ಕೆ 12 ಸೂತ್ರಗಳು" ಎಂಬ ಸಿನಿಮಾದಲ್ಲಿ ನಟಿ ಗಾಯಿತ್ರಿ ಇರುವವರು ನಟಿಸಿದ್ದಾರೆ.

ನಟ ಅನಂತ್ ನಾಗ್ ಮದುವೆ ನಡೆದಿದ್ದು ಎಲ್ಲಿ?
ನಟಿ ಗಾಯಿತ್ರಿ ಅವರ ಜೊತೆ ಅನಂತನಾಗ್ ರವರೇ ಮದುವೆ ವಿಚಾರವನ್ನು ಮಾತನಾಡಿ ಒಪ್ಪಿಸಿ, ಕೊನೆಗೆ ಏಪ್ರಿಲ್ 1987ರಲ್ಲಿ ತಮ್ಮ ಮನೆಯಲ್ಲೇ ಕೇವಲ 25 ಆತ್ಮೀಯರ ಸಮ್ಮುಖದಲ್ಲಿ ನಟ ಅನಂತನಾಗ್ ಮತ್ತು ಗಾಯತ್ರಿರವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನೂ ಇವರಿಗೆ ಅದಿತಿ ಎಂಬ ಮಗಳು ಕೂಡ ಇದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಎಲ್ಲರ ಜೊತೆ ನಟಿಸಿರುವ ನಟ
ಕನ್ನಡ ಚಿತ್ರರಂಗದಲ್ಲಿ ನಟ ಅನಂತ್ ನಾಗ್ ರವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡದ ಇತರೆ ನಡೆದುಗಳ ಜೊತೆಯಲ್ಲಿ ತೆರೆಹಂಚಿಕೊಂಡಿದ್ದಾರೆ. ಡಾ. ರಾಜಕುಮಾರ್ ಕಾಲದ ನಟರಿಂದ ಹಿಡಿದು ಈಗಿನ ಚಾಲೆಂಜಿಂಗ್ ಸ್ಟಾರ್ ದರ್ಶನ್, ಗೋಲ್ಡನ್ ಸ್ಟಾರ್ ಗಣೇಶ್, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಇನ್ನೂ ಹಲವು ನಟರ ಜೊತೆ ಅಭಿನಯ ಮಾಡಿದ್ದಾರೆ. ಕೆಜಿಎಫ್ ಸಿನಿಮಾದಲ್ಲೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಇವಾಗ್ಲೂ ಬಣ್ಣದ ಲೋಕದಲ್ಲಿ ಸಕ್ರಿಯವಾಗಿದ್ದಾರೆ.

ಪ್ರಿಯಾ ಓದುಗರೇ ಇದಿಷ್ಟು ನಟ ಅನಂತ್ ನಾಗ್ ಬಗ್ಗೆ ತಿಳಿಸಲು ನಾವು ಮಾಡಿರುವ ಚಿಕ್ಕ ಪ್ರಯತ್ನವಷ್ಟೇ. ನಟವ ಅನಂತನಾಗ್ ಅವರ ಜೀವನ, ಅವರ ಸಾಧನೆಗಳ ಬಗ್ಗೆ ಮಾತನಾಡುವುದು ಬೆಟ್ಟದಷ್ಟಿದೆ.