Ticker

6/recent/ticker-posts

ನಟ ಅನಂತನಾಗ್ ರವರು ಶಂಕರ್ ನಾಗ್ ಜೊತೆ ಹೇಗೆ ಇರ್ತಿದ್ರು ಗೊತ್ತಾ.!

ನಟ ಅನಂತನಾಗ್ ರವರಿಗೆ ಸಹೋದರ ಶಂಕರ್ ನಾಗ್ ಅವರನ್ನು ಕಂಡರೆ ತುಂಬಾ ಪ್ರೀತಿ. ಇನ್ನು ನಟ ಶಂಕರ್ ನಾಗ್ ಅವರಿಗೆ ಅಣ್ಣನನ್ನು ಕಂಡರೆ ಬಹಳಷ್ಟು ಗೌರವ ಮತ್ತು ಭಯ ಕೂಡ ಇತ್ತು. ಅನಂತ್ ನಾಗ್ ಮತ್ತು ಶಂಕರ್ ನಾಗ್ ರವರು ಅಣ್ಣತಮ್ಮ ತರ ಇದ್ದರೂ ಅನ್ನೋದಕ್ಕಿಂತ ಅಪ್ಪ ಮಗ ತರ ಇದ್ರು ಅಂದ್ರು ತಪ್ಪಾಗಲ್ಲ.

ನಟ ಅನಂತನಾಗ್ ಮತ್ತು ಶಂಕರ್ ನಾಗ್ ರವರು ಒಟ್ಟಿಗೆ ನಟಿಸಿರುವ ಸಿನಿಮಾಗಳು ಯಾವ್ಯಾವು ನೋಡಿ
ಮಿಂಚಿನ ಓಟ, ಒಂದು ಹೆಣ್ಣು ಆರು ಕಣ್ಣು, ಆಕ್ಸಿಡೆಂಟ್, ತಾಯಿ ಹಾಗೂ ಜನ್ಮ ಜನ್ಮದ ಅನುಬಂಧ ಸೇರಿದಂತೆ ಹಲವು ಸಿನಿಮಾಗಳಲ್ಲಿ ಶಂಕರ್ ನಾಗ್ ಜೊತೆ ಅನಂತ್ ನಾಗ್ ರವರು ತೆರೆ ಹಂಚಿಕೊಂಡಿದ್ದಾರೆ.

ನಟಿ ಗಾಯಿತ್ರಿ ಅವರಿಗೆ ಅಣ್ಣನನ್ನು ಪರಿಚಯ ಮಾಡಿಸಿದ್ದೆ ಶಂಕರ್ ನಾಗ್
ನಟ ಶಂಕರ್ ನಾಗ್ ಜೊತೆ ನಟಿ ಗಾಯಿತ್ರಿರವರು ಸಿನಿಮಾ ಶೂಟಿಂಗ್ನಲ್ಲಿ ತೊಡಗಿದ್ದರು. ಆ ಸಮಯದಲ್ಲಿ ನಟ ಶಂಕರ್ ನಾಗ್ ರವರು ನಟಿ ಗಾಯತ್ರಿ ರವರನ್ನು ನಮ್ಮ ಅಣ್ಣ ಇಲ್ಲೇ ಪಕ್ಕದ ಸೆಟ್ನಲ್ಲಿ ಆಕ್ಟ್ ಮಾಡ್ತಿದ್ದಾರೆ ಬನ್ನಿ ಅಂತ ಹೇಳಿ ಕರ್ಕೊಂಡು ಬಂದು ಪರಿಚಯ ಮಾಡಿಸಿದ್ದಾರಂತೆ.