Ticker

6/recent/ticker-posts

Chikkanna Life story : ಚಿಕ್ಕಣ್ಣ ಕಾಮಿಡಿ ನಟ ಆಗಿದ್ದು ಹೇಗೆ?

ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹಾಸ್ಯ ನಟ ಚಿಕ್ಕಣ್ಣ ರವರು ತಮ್ಮ ವಿಶಿಷ್ಟ ಮಾನ್ಯರಿಸಮ್ ಮೂಲಕ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದ್ದಾರೆ. ಸಾಮಾನ್ಯ ಕೆಲಸ ಮಾಡಿಕೊಂಡು ಇದ್ದ ಚಿಕ್ಕಣ್ಣ ಹೀರೋ ಆಗಿದ್ದು ಹೇಗೆ, ಹಾಗೂ ಚಿಕ್ಕಣ್ಣ ರವರ ಕಷ್ಟದ ದಿನಗಳ ಬಗ್ಗೆ ತಿಳಿಸಿ ಕೊಡ್ತೀವಿ ಮಿಸ್ ಮಾಡ್ದೆ ಕೊನೆವರೆಗೂ ಓದಿ.

ಒಂದು ಚಿಕ್ಕ ಹಳ್ಳಿಯಿಂದ ಚಿತ್ರರಂಗಕ್ಕೆ ಬಂದು ಚಿಕ್ಕ ಚಿಕ್ಕ ಕನಸುಗಳನ್ನು ಕಾಣುತ್ತಾ ಅನಂತರ ಸಣ್ಣಪುಟ್ಟ ಅವಕಾಶಗಳನ್ನ ಉಪಯೋಗಿಸಿಕೊಂಡು. ಇದೀಗ ಬೆಳ್ಳಿ ಪರದೆ ಮೇಲೆ ರಾಜಾಜಿಸುತ್ತಿದ್ದಾರೆ. ಚಿಕ್ಕಣ್ಣ ರವರು ಇವತ್ತು ಈ ಮಟ್ಟಕ್ಕೆ ಬೆಳೆದಿದ್ದಾರೆ ಅಂದರೆ ಇದರ ಹಿಂದೆ ಬಹಳಷ್ಟು ಕಹಿ ಘಟನೆಗಳು ಇವೆ. ಗಾರೆ ಕೆಲಸ ಮಾಡ್ತಿದ್ದ ಚಿಕ್ಕಣ್ಣ ರವರು ಈ ಸ್ಥಾನಕ್ಕೆ ಬರಲು ಎಷ್ಟು ಕಷ್ಟಪಟ್ಟಿದ್ದಾರೆ ನೋಡೋಣ ಬನ್ನಿ.ಚಿಕ್ಕಣ್ಣ ರವರು ಹುಟ್ಟಿದ್ದು 22 ಜೂನ್ 1984 ರಲ್ಲಿ ಮೈಸೂರಿನ ಬಲ್ಲಹಳ್ಳಿಯಲ್ಲಿ. ಇವರ ತಂದೆ ಬೈರೇಗೌಡ ಹಾಗೂ ತಾಯಿ ನಿಂಗಮ್ಮ ಈ ದಂಪತಿಯ ಆರು ಜನ ಮಕ್ಕಳಲ್ಲಿ ಐದನೆಯವರು ಚಿಕ್ಕಣ್ಣ.

ಕಡು ಬಡತನದ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೂ ಕಷ್ಟಗಳನ್ನ ಎದುರಿಸುತ್ತ ಬೆಳೆಯುತ್ತಾರೆ. ತಮ್ಮ ಊರಿನಲ್ಲಿ ವಿದ್ಯಾಭ್ಯಾಸ ಮಾಡುವಾಗಲೂ ಸಹ ವಿದ್ಯಾಭ್ಯಾಸದ ಜೊತೆಗೆ ಮನೆಯ ಆರ್ಥಿಕ ಸಮಸ್ಯೆಯಿಂದ ರಜಾ ದಿನಗಳಲ್ಲಿ ಗಾರೆ ಕೆಲಸಗಳನ್ನು ಕೂಡ ಮಾಡುತ್ತಾರೆ. SSLC ಓದುವಾಗ ತಮ್ಮ ಗೆಳೆಯರ ಜೊತೆ ಸೇರಿ ನಾಟಕ ಒಂದನ್ನು ಮಾಡುತ್ತಾರೆ.ನಾಟಕದಲ್ಲಿ ಚಿಕ್ಕಣ್ಣ ರವರು ಮೊದಲ ಬಾರಿಗೆ ಚಾರ್ಲಿ ಚಾಪ್ಲಿನ್ ಪಾತ್ರವನ್ನು ಮಾಡುತ್ತಾರೆ. ಚಿಕ್ಕಣ್ಣ ಶಾಲಿಯಲ್ಲಿ ಓದುವಾಗ ಮನೆಯಲ್ಲಿ ಬಡತನ ಇರೋದ್ರಿಂದ ಸರಿಯಾಗಿ ಊಟ ಸಹ ಸಿಗುತ್ತಿರಲಿಲ್ಲ. ಮನೆಯಲ್ಲಿದ್ದ ಬಡತನದಿಂದ ಎಸ್ ಎಸ್ ಎಲ್ ಸಿ ಆದ ಮೇಲೆ ಚಿಕ್ಕಣ್ಣ ವಿದ್ಯಾಭ್ಯಾಸ ಗಾರೆ ಕೆಲಸ ಮಾಡುತ್ತಾರೆ.

ಚಿಕ್ಕ ವಯಸ್ಸಿನಿಂದಲೂ ಏನಾದರೂ ಸಾಧಿಸಬೇಕು ಎನ್ನುವ ಛಲ ಇವರಿಗಿತ್ತು. ಆದರೆ ಇವರ ತಂದೆಗೆ ನಾಟಕ ಮಾಡುತ್ತಿರುವುದು ಸ್ವಲ್ಪವೂ ಇಷ್ಟ ಇರಲಿಲ್ಲ ಅವರು ನೀನು ನಾಟಕ ಮಾಡಿದರೆ ನಿನ್ನ ಕಾಲು ಕಡಿಯುತ್ತೇನೆ ಎಂದು ಎದುರಿಸುತ್ತಾ ಇದ್ದರು. ಕೆಲಸ ಮಾಡುತ್ತಲೇ ಇವರು ಮೈಸೂರು ದೃಶ್ಯ ಕಲಾವಿದೆ ನಾಟಕ ಮಂಡಳಿಯನ್ನು ಸೇರುತ್ತಾರೆ ಹಾಗೂ ಅನೇಕ ನಾಟಕಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ದಿನವಿಡೀ ಗಾರೆ ಕೆಲಸ ಮಾಡಿ ರಾತ್ರಿ ವೇಳೆ ನಾಟಕ ತರಬೇತಿ ಪಡೆದು ನಾಟಕಗಳಲ್ಲಿ ಅಭಿನಯಿಸುತ್ತಾರೆ. ಇವರು ನಾಟಕಗಳಲ್ಲಿ ಮಾತ್ರವಲ್ಲದೆ ಸೀರಿಯಲ್ ಗಳನ್ನು ನಟನೆ ಮಾಡಿದ್ದಾರೆ.ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕ್ಲಾಸ್ಮೇಟ್ಸ್ ಸೀರಿಯಲ್ ನಲ್ಲಿ ಅಭಿನಯಿಸಿದ್ದಾರೆ. ನಾಟಗಳಲ್ಲಿ ಇವರ ಅಭಿನಯ ಕಂಡು ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳಲ್ಲಿ ಅವಕಾಶ ಸಿಗುತ್ತದೆ.

ಬೆಂಗಳೂರಿಗೆ ಆಗ ತಾನೆ ಬಂದಿದ್ದ ಚಿಕ್ಕಣ್ಣನವರಿಗೆ ಯಾರ ಪರಿಚಯ ಇಲ್ಲದ ಕಾರಣ ಅವರು ಮೆಜೆಸ್ಟಿಕ್ ನಲ್ಲಿ ರಾತ್ರಿ ವೇಳೆ ಓಡಾಡುತ್ತಾ ಕಾಲ ಕಳೆಯುತ್ತಿದ್ದರು. ಬೆಳಗ್ಗೆ ಎದ್ದು ಪಬ್ಲಿಕ್ ಶೌಚಾಲಯದಲ್ಲಿ ಮೂರು ರೂಪಾಯಿಗಳನ್ನು ಕೊಟ್ಟು ಸ್ನಾನ ಮಾಡಿ ಕಾಮಿಡಿ ಕಿಲಾಡಿಗಳು ಶೂಟಿಂಗ್ ಗೆ ಹೋಗುತ್ತಿದ್ದರು. ಇನ್ನು ಈ ಶೋನಲ್ಲಿ ಇವರು ಮತ್ತು ಕುರಿ ಪ್ರತಾಪ್ ಕಾಮಿಡಿಗೆ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗುತ್ತದೆ ಇದರ ನಂತರ ಇವರಿಗೆ ಅನೇಕ ಅವಕಾಶಗಳು ಸಿಗುತ್ತವೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತಾ ಬಂದ ಹಣದಲ್ಲಿ ಬೆಂಗಳೂರಿನಲ್ಲಿ ಒಂದು ರೂಮ್ ಮಾಡುತ್ತಾರೆ.