Ticker

6/recent/ticker-posts

ಅಭಿಮಾನಿಯ ಟ್ಯಾಟೂ ನೋಡಿ ಗಿಲ್ಲಿ ಶಾಕ್.! ಟ್ಯಾಟೂ ನೋಡಿ ಗಿಲ್ಲಿ ಏನ್ ಹೇಳುದ್ರು ಗೊತ್ತಾ?

ಬಿಗ್ ಬಾಸ್ ಷೋನ ಮೂಲಕ ರಾಜ್ಯಾದ್ಯಂತ ಗಿಲ್ಲಿ ಕ್ರೇಜ್ ಹಾಗೂ ಖದರ್ ಜೋರಾಗಿದೆ. ಈಗಾಗಲೇ ಷೋ ಗ್ರಾಂಡ್ ಫಿನಾಲೆ ಹಂತಕ್ಕೆ ತಲುಪಿದ್ದು ಜನವರಿ 17ರಂದು ಪ್ರಸಾರವಾಗಲಿದೆ. ಬಿಗ್ ಬಾಸ್ ಶುರುವಾದಾಗಿನಿಂದ ಭಾರಿ ಸಂಚಲನ ಮೂಡಿಸಿರುವ ಗಿಲ್ಲಿ ನಟ ಅವರು ಅಪಾರ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದಾರೆ. ಗಿಲ್ಲಿ ಪರ ಈಗಾಗಲೇ ಅಭಿಮಾನಿಗಳು ಪ್ರಚಾರದಲ್ಲಿ ತೊಡಗಿದ್ದಾರೆ. ತಮ್ಮ ನೆಚ್ಚಿನ ಸ್ಪರ್ಧಿ ಗೆಲ್ಲಿಸಲು ಈಗಾಗಲೇ ವೀಕ್ಷಕರು ಕುಟುಂಬ ಮತ್ತು ಸ್ನೇಹಿತರ ಬಳಿಯು ವೋಟ್ ಮಾಡಿಸುತ್ತಿದ್ದಾರೆ. ಈ ನಡುವೆ ಕೆಲವು ಅಪ್ಪಟ ಅಭಿಮಾನಿಗಳ ಕ್ರೇಜ್ ಯಾವ ಲೆವೆಲ್ ಗೆ ಹೋಗಿದೆ ಅಂದ್ರೆ, ತಮ್ಮ ನೆಚ್ಚಿನ ಗಿಲ್ಲಿ ನಟ ಅವರ ಫೋಟೋವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇನ್ನೂ ಟ್ಯಾಟೂ ಹಾಕಿಸಿಕೊಂಡಿರುವ ಅಭಿಮಾನಿಯನ್ನು ನೀವು ಕೂಡ ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದ್ದೀರಾ ಎಂದು ಭಾವಿಸುತ್ತೇವೆ.

ಬಿಗ್ ಮನೆಗೆ ಬಂದ ಟ್ಯಾಟೂ ಅಭಿಮಾನಿ
ಫೈನಲ್ ವೀಕ್ ನಲ್ಲಿರುವ ಬಿಗ್ ಬಾಸ್ ಸೀಸನ್ 12 ಇನ್ನೇನೋ ಕೆಲವು ದಿನಗಳಲ್ಲಿ ಮುಕ್ತಾಯ ಆಗಲಿದೆ. ಗೋಲ್ಡನ್ ವೀಕ್ ಎಂಜಾಯ್ ಮಾಡುತ್ತಿರುವ ಬಿಗ್ ಮನೆಯ ಸ್ಪರ್ಧಿಗಳಿಗೆ ಬಿಗ್ ಬಾಸ್ ಫ್ಯಾನ್ಸ್ ಮೀಟ್ ಅನ್ನು ಆಯೋಜನೆ ಮಾಡಿದ್ದಾರೆ. ಇನ್ನೂ ಗಿಲ್ಲಿ ಫ್ಯಾನ್ಸ್ ಮೀಟ್ ನಲ್ಲಿ ಗಿಲ್ಲಿ ಟ್ಯಾಟೂ ಹಾಕಿಸಿಕೊಂಡಿರುವ ಅಭಿಮಾನಿಯನ್ನು ಬಿಗ್ ಮನೆಗೆ ಕಳುಹಿಸಿದ್ದಾರೆ. ಬಿಗ್ ಮನೆಯಲ್ಲಿರುವ ಗಿಲ್ಲಿಗೆ ಸಖತ್ ಸರ್ಪ್ರೈಸ್ ಕೊಟ್ಟಿದ್ದಾರೆ ಬಿಗ್ ಬಾಸ್ ಟೀಮ್.

ಅಭಿಮಾನಿ ಟ್ಯಾಟೂ ನೋಡಿ ಸೈಕ್ ಆದ ಗಿಲ್ಲಿ
ಬಿಗ್ ಮನೆಯ ಫ್ಯಾನ್ಸ್ ಮೀಟ್ ನಲ್ಲಿ ಗಿಲ್ಲಿ ತಮ್ಮ ಅಭಿಮಾನಿಗಳನ್ನು ನೋಡಿ ತುಂಬಾ ಖುಷಿಯಾಗಿದ್ದರೆ. ಅಭಿಮಾನಿಗಳ ಭೇಟಿಯಲ್ಲಿ ತನ್ನದೇ ಟ್ಯಾಟೂ ನೋಡಿ ಗಿಲ್ಲಿ ಶಾಕ್ ಆಗಿ ಅನಂತರ ಆ ಅಭಿಮಾನಿಯನ್ನು ಖುಷಿಯಿಂದ ಮಾತಾಡಿಸಿದ್ದಾರೆ. ಆ ಟ್ಯಾಟು ಹಾಕಿಸಿಕೊಂಡಿರುವ ಅಭಿಮಾನಿ ಕೂಡ ಮಳವಳ್ಳಿ ಅವರೇ.ಫ್ಯಾನ್ಸ್ ಮೀಟ್ ಮುಗಿಸಿ ಮನೆ ಒಳಗೆ ಹೋದ ಗಿಲ್ಲಿ "ಯಾರೋ ಒಬ್ಬರು ಅಭಿಮಾನಿ ನನ್ ಟ್ಯಾಟೂ ಹಾಕಿಸ್ಕೊಂಡ್ ಬಂದಿದ್ರು, ನಾನ್ ಸೈಕ್ ಆಗಿ ಏನ್ ಮಾತಾಡ್ಬೇಕು ಅಂತಾನೆ ಗೊತಾಗ್ಲಿಲ್ಲ" ಎಂದು ಕಾವ್ಯ ಮತ್ತು ರಘು ಜೊತೆ ಹಂಚಿಕೊಂಡರು.

ಬಿಗ್ ಮನೆಯಿಂದ ಬಂದ ಕೂಡಲೇ ಫಸ್ಟ್ ಅ ಅಭಿಮಾನಿ ಅಣ್ಣನ ಭೇಟಿ ಆಗ್ಲೇಬೇಕು ಎಂದು ಕೂಡ ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ.ಏನೇ ಹೇಳಿ ಗಿಲ್ಲಿ ನಟ ಇಷ್ಟು ಅಭಿಮಾನಿಗಳ ಪ್ರೀತಿ ಗಳಿಸಿರೋದು ನಿಜಕ್ಕೂ ಅವನ ಅದೃಷ್ಟ ಅಂತಾನೆ ಹೇಳಬಹುದು. ಬಿಗ್ ಬಾಸ್ ಸೀಸನ್ 12 ರಲ್ಲಿ ಗಿಲ್ಲಿನೇ ಗೆಲ್ಲೋದು ಎಂದು ಈಗಾಗಲೇ ಎಲ್ಲರೂ ಸೆಲೆಬ್ರೇಶನ್ ಮಾಡಲು ತಯಾರಿ ನಡೆಸಿದ್ದಾರೆ. ಅಭಿಮಾನಿಗಳ ನೀರಿಕ್ಷೆಯಂತೆ ಈ ಸಲ ಗಿಲ್ಲಿ ಗೆದ್ದು ಗೆಲುವನ್ನು ಸಂಭ್ರಮಿಸಲಿ.

Post a Comment

0 Comments