Ticker

6/recent/ticker-posts

ನಟ ಶಂಕರ್ ನಾಗ್ ಗೆ ಅಪಘಾತ ಆಗಿದ್ದೇಗೆ?ಅಣ್ಣ ಅನಂತ್ ನಾಗ್ ಹೇಳಿದ್ದೇನು ಗೊತ್ತಾ.!

ಸಹೋದರ ಶಂಕರ್ ನಾಗ್ ಬಗ್ಗೆ ನಟ ಅನಂತ್ ನಾಗ್ ಮನದಾಳದ ಮಾತುಗಳು
ಶಂಕರ್ ಕೂಡ ಮುಂಬೈನಲ್ಲಿ ನನ್ನ ಜೊತೆಯಲ್ಲೇ ಬೆಳೆದ, ನಾನು ಅವನಿಗೆ ಒಂದು ರೀತಿಯಲ್ಲಿ ಅಣ್ಣ ಆದರೆ ಇನ್ನೊಂದು ರೀತಿಯಲ್ಲಿ ಸಾಕು ತಂದೆಯಾದೆ. ನಾನು ಸಿನಿಮಾಗೆ ಬಂದೆ ಅವನು ಕೂಡ ಸಿನಿಮಾ ರಂಗಕ್ಕೆ ಬಂದ, ಕೇವಲ 12 ವರ್ಷದಲ್ಲೇ ಕನ್ನಡ ಚಿತ್ರದಲ್ಲಿ ಅನೇಕ ಸಾಧನೆ ಮಾಡಿದ. ಶಂಕರ್ ಮೊದಲ ಚಿತ್ರದಲ್ಲೇ ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದುಕೊಂಡ. ಅವನಿಗೆ ನಿರ್ದೇಶನದತ್ತ ಒಲವಿತ್ತು, ತದನಂತರ ಸಿನಿಮಾಗಳು ಮಾಡಿದ್ವಿ ಮಾಲ್ಗುಡಿ ಡೇಸ್ ಮಾಡಿದ್ವಿ ಒಳ್ಳೆಯ ಯಶಸ್ಸು ಸಿಕ್ತು. ಅಷ್ಟರಲ್ಲಿ ಆ ದೇವರಿಗೆ ಏನ್ ಅನಿಸ್ತೋ ಏನೋ ಹಠತಾನೇ ಕರೆದುಕೊಂಡು ಬಿಟ್ಟ.

ಬಹುಶಃ ದೇವರು ಅವನಿಗೆ ಆಯಸ್ಸು ಕೊಟ್ಟಿದ್ದೆ ಕಡಿಮೆ ಅನ್ಸುತ್ತೆ, ಮಾಲ್ಗುಡಿ ಡೇಸ್ ಆದಮೇಲೆ ಶಂಕರ್ ಗೆ ಚಡಪಡಿಕೆ ಅದ್ ಮಾಡ್ಬೇಕು ಇದ್ ಮಾಡ್ಬೇಕು ಆ ಪ್ರಾಜೆಕ್ಟ್ ಇ ಪ್ರಾಜೆಕ್ಟ್ ಅನ್ಕೊಂಡು ನಾವೇ ಅವಸರದಲ್ಲಿ ಸಂಕೇತ್ ಸ್ಟುಡಿಯೋ ಹಾಕೊಂಡಿದ್ದು.

ಜೊತೆಗೆ ನಾವು ಆರ್ಥಿಕವಾಗಿ ಆಗಲೇ ಸಮಸ್ಯೆಯಲ್ಲಿ ಇದ್ವಿ. ನಾನ್ ಆಗ್ಲೇ ಹೇಳ್ದೆ ಶಂಕರ್ ಗೆ "ನೀನ್ ಹೋಗೋ ಸ್ಪೀಡ್ ನೋಡಿದ್ರೆ ಏನ್ ಆಗುತ್ತೋ ಗೊತ್ತಿಲ್ಲ, ನೋಡು ನಾವಿಬ್ಬರು ಇದ್ದಾಗ ಸಾಲ ಕೊಡೋಕೆ ತುಂಬಾ ಜನ ಇರ್ತರೆ ಇಬ್ಬರಲ್ಲಿ ಒಬ್ಬ ಇಲ್ಲ ಅಂದ್ರು ಹೋದವನು ಬಚಾವ್ ಇದ್ದವನು ಅನುಭವಿಸುತ್ತಾನೆ " ಅಂತ ಯಾವ ಕ್ಷಣದಲ್ಲಿ ಆ ಮಾತು ಹೇಳಿದ್ನೋ ಆ ಭಗವಂತ ಅವನನ್ನು 35 ವರ್ಷಕ್ಕೆ ಕರೆದುಕೊಂಡು ಬಿಟ್ಟ.

ಎಲ್ಲಾ ವಿಧಿ ದೈವದ್ದೆ ಆದರೆ ಶಂಕರ್ ಹೋದಾಗ ಒಂದು ಕಡೆ ನೋವು. ಆ ನೋವು ಅನುಭವಿಸೋದಕ್ಕು ಕೂಡ ಸಮಯವಿಲ್ಲ ಅನ್ನುವಷ್ಟು ಅಂತ ದೊಡ್ಡದಾದ ಸಮಸ್ಯೆಗಳು ಹುಟ್ಟಿಕೊಂಡವು. ಕೊನೆಗೆ ಆ ಕಷ್ಟಕಾಲದಲ್ಲಿ ಒಂಟಿಯಾಗಿದ್ದೆ ಆದರೆ ಆ ಸಮಯದಲ್ಲಿ ನನಗೆ ಗಟ್ಟಿಯಾಗಿ ಮತ್ತು ಬೆಂಬಲವಾಗಿ ನಿಂತಿದ್ದು ನನ್ನ ಪತ್ನಿ ಗಾಯತ್ರಿ.

ಅನಂತರ ಆ ಎಲ್ಲಾ ಸಮಸ್ಯೆಗಳಿಂದ ಸುಧಾರಿಸಿಕೊಂಡು ಹೊರಬರಲು 10ವರ್ಷ ಆಯ್ತು. ಒಂದು ಕಡೆ ಅವನು ಹೋದ ನೋವು ಇನ್ನೊಂದು ಕಡೆ ಈ ರೀತಿ ಆಯ್ತಲ್ಲ, ಒಂದ್ ಒಂದ್ ಸಲ ಅನ್ಸುತ್ತೆ ಆ ದೇವರೇ ನನಗೆ ಶಿಕ್ಷಿಸಲು ದಂಡಿಸಲು ಅವನನ್ನು ಬೇಗ ಕರ್ಕೊಂಡು ಬಿಟ್ನಾ ಅಂತ. ಅದಿಕ್ಕೆ ನಾನು ಆ ಭಗವಂತನನ್ನು ಕ್ಷಮಿಸೋದಿಲ್ಲ ಅವನನ್ನು ಬೇಗ ಎಳ್ಕೊಂಡು ಹೋಗಿದ್ದಕ್ಕೆ. ಆಮೇಲೆ ಇನ್ನೊಂದು ವಿಷಯ ಇದನ್ನು ಹೇಳಲೇಬೇಕು ಶಂಕರ್ ಕೆಲವು ಹಿಟ್ ಸಿನಿಮಾಗಳನ್ನು ಕೊಟ್ಟಮೇಲೆ ಕೆಲವರು ಅವನನ್ನು ಒಂದು ಗಂಟೆ ರೆಸ್ಟ್ ಕೂಡ ಮಾಡಲು ಬಿಡದೆ ಅವನನ್ನು ದುಡಿಸೋದಕ್ಕೆ ಹಿಂದೆ-ಮುಂದೆ ನೋಡಲಿಲ್ಲ. ಕೊನೆಗೆ ಯಾರಿಗೋ ಮಹಾ ಉಪಕಾರ ಮಾಡಲು ಹೋಗಿನೇ ಈ ಆಕ್ಸಿಡೆಂಟ್ ಕೂಡ ಆಗಿದ್ದು. ( ಈ ಸಂಪೂರ್ಣ ಮಾಹಿತಿಯನ್ನು ನಟ ಅನಂತ್ ನಾಗ್ ಅವರು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ)

Post a Comment

0 Comments