ಧನುಷ್ ಗೌಡ
ಗೀತಾ ಸೀರಿಯಲ್ ಕಿರುತೆರೆ ನಟ ಧನುಷ್ ಗೌಡ ಅವರು 5ನೇ ರನ್ನರ್ ಅಪ್ ಆಗಿದ್ದಾರೆ. ಇವರಿಗೆ ಸಿಕ್ಕ ಬಹುಮಾನ 2ಲಕ್ಷ ಹಾಗೂ 1.5 ಲಕ್ಷ ಕ್ಯಾಶ್ ಪ್ರೈಸ್.
ರಘು
ಕ್ರೀಡಾಪಟು ಹಾಗೂ ಜಿಮ್ ರಘು ಅವರು 4ನೇ ರನ್ನರ್ ಅಪ್ ಆಗಿದ್ದಾರೆ. ಇನ್ನೂ ರಘು ಅವರಿಗೆ 2 ಲಕ್ಷ ಹಾಗೂ 1 ಲಕ್ಷ ಕ್ಯಾಶ್ ಪ್ರೈಸ್.
ನಟಿ ಕಾವ್ಯ ಶೈವಾ
ಕಿರುತೆರೆ ನಟಿ ಕಾವ್ಯ ಅವರು 3ನೇ ರನ್ನರ್ ಅಪ್ ಆಗಿದ್ದಾರೆ. ಇನ್ನೂ ನಟಿ ಕಾವ್ಯ ಅವರಿಗೆ 10 ಲಕ್ಷ ಕ್ಯಾಶ್ ಪ್ರೈಸ್ ಲಭಿಸಿದೆ.
ಅಶ್ವಿನಿ ಗೌಡ
ಕನ್ನಡ ಪರ ಹೋರಾಟಗಾರ್ತಿ ಅಶ್ವಿನಿ ಗೌಡ ರವರು 2ನೇ ರನ್ನರ್ ಅಪ್ ಆಗಿದ್ದಾರೆ. ಇವರಿಗೆ ಬಿಗ್ ಬಾಸ್ ಷೋ ನಲ್ಲಿ ವಾಕ್ಮೇಟ್ ಕಡೆಯಿಂದ 7ಲಕ್ಷ ಹಾಗೂ ಎಕೋ ಪ್ಲಾನೆಟ್ elevator 2ಲಕ್ಷ ಹಾಗೂ ಶ್ರೀ ಕೃಷ್ಣ ಹಳ್ಳಿ ತುಪ್ಪ ಕಡೆಯಿಂದ 5 ಲಕ್ಷ.
ರಕ್ಷಿತಾ ಶೆಟ್ಟಿ
ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಅವರು ಮೊದಲನೇ ರನ್ನರ್ ಅಪ್ ಆಗಿದ್ದಾರೆ. ಇನ್ನೂ ಬಿಗ್ ಬಾಸ್ ಇತಿಹಾಸದಲ್ಲಿ ನಟಿ ಶ್ರುತಿ ಬಿಟ್ಟರೆ ರಕ್ಷಿತಾ ಕೈ ಮಾತ್ರ ಸುದೀಪ್ ಸರ್ ಕೈಯಲ್ಲಿ ವಿಂನಿಂಗ್ ಅನೌನ್ಸ್ಮೆಂಟ್ ನಲ್ಲಿ ಇದಿದ್ದು. ರಕ್ಷಿತಾ ಅವರಿಗೆ ಬಹುಮಾನವಾಗಿ ಶ್ರೀ ಸಾಯಿ ಗೋಲ್ಡ್ ಕಡೆಯಿಂದ 20 ಲಕ್ಷ ಗಿಫ್ಟ್ ವೊಚರ್ ಹಾಗೂ ಜಾರ್ ಆಪ್ ಕಡೆಯಿಂದ 5 ಲಕ್ಷ.
Bigg boss Kannada 12 winner ಗಿಲ್ಲಿನಟ
Trp ಕಿಂಗ್ ಅಂತಲೇ ಜನಪ್ರಿಯ ಆಗಿರುವ ಹಳ್ಳಿ ಹೈದ ಗಿಲ್ಲಿ ನಟ ಅವರು BBK12 ಅನ್ನು ಗೆದ್ದಿದ್ದಾರೆ. ಗಿಲ್ಲಿ ನಟ ಅವರಿಗೆ ಕ್ಯಾಶ್ ಪ್ರೈಸ್ ಆಗಿ 50 ಲಕ್ಷ ಹಾಗೂ ಮಾರುತಿ ಸುಜುಕಿ ಕಾರ್ ಮತ್ತು ನಟ ಕಿಚ್ಚ ಸುದೀಪ್ ಅವರು ಕೂಡ ವೈಯಕ್ತಿಕವಾಗಿ 10ಲಕ್ಷ ವನ್ನು ಘೋಷಣೆ ಮಾಡಿದ್ದಾರೆ.